ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ವಿದ್ಯಾರ್ಥಿನಿಲಯಗಳ ಸೇರ್ಪಡೆಗೆ ಅರ್ಜಿ ಆಹ್ವಾನ

ವಿದ್ಯಾರ್ಥಿನಿಲಯಗಳ ಸೇರ್ಪಡೆಗೆ ಅರ್ಜಿ ಆಹ್ವಾನ

Thu, 29 Apr 2010 13:42:00  Office Staff   S.O. News Service

ಮಂಗಳೂರು ಏಪ್ರಿಲ್ ೨೯:-ಪುತ್ತೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ೨೦೧೦-೧೧ನೇ ಸಾಲಿನಲ್ಲಿ ಸೇರ್ಪಡೆ ಬಯಸುವ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದ ೫ನೇ ತರಗತಿಯಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಿದೆ. ಸದ್ರಿ ನಿಲಯಗಳಲ್ಲಿ ಉಚಿತವಾಗಿ ಊಟ, ವಸತಿ ಅಲ್ಲದೆ ಸಮವಸ್ತ್ರ, ಲೇಖನ ಸಾಮಗ್ರಿ ಹಾಗೂ ಇನ್ನಿತರೇ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಪುತ್ತೂರು ತಾಲೂಕಿನಲ್ಲಿ ಬಾಲಕರಿಗಾಗಿ ಕೊಂಬೆಟ್ಟು, ಕಡಬ, ಕೊಣಾಲು, ಪಾಳ್ಯತಡ್ಕ, ಬಾಲಕಿಯರಿಗಾಗಿ ಹಾರಾಡಿಯಲ್ಲಿ ವಿದ್ಯಾರ್ಥಿ ನಿಲಯಗಳಿರುತ್ತದೆ. ಅಲ್ಲದೆ ಸಾಜಾ ಬಲ್ನಾಡು ಎಂಬಲ್ಲಿ ೧ರಿಂದ ೫ನೇ ತರಗತಿಯ ತನಕದ ವಿದ್ಯಾರ್ಥಿಗಳಿಗಾಗಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆ ಇರುತ್ತದೆ. 
ಅರ್ಜಿಯೊಂದಿಗೆ ಅಭ್ಯರ್ಥಿಯ ತೇರ್ಗಡೆ ಹೊಂದಿರುವ ಅಂಕಪಟ್ಟಿ ನಕಲು ಮತ್ತು ತಹಸೀಲ್ದಾರರಿಂದ ಪಡೆದಿರುವ ಜಾತಿ ಆದಾಯ ದೃಢಪತ್ರದ ನಕಲು ನೀಡಬೇಕು. ವರ್ಗ ೧ ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯ ಮಿತಿ ಇರುವುದಿಲ್ಲ. ಉಳಿದಂತೆ ವರ್ಗ ೨ಎ, ೨ಬಿ,೩ಎ,೩ಬಿ ಗೆ ಸೇರಿರುವ ವಿದ್ಯಾರ್ಥಿಗಳ ಆದಾಯ ಮಿತಿ ವಾರ್ಷಿಕ ೧೫,೦೦೦/- ಮಿತಿಯೊಳಗಿರತಕ್ಕದ್ದು. ಅರ್ಜಿಗಳನ್ನು ವಿದ್ಯಾರ್ಥಿನಿಲಯಗಳಲ್ಲಿ ಅಥವಾ ತಾಲೂಕು ಪಂಚಾಯತ್ ಕಚೇರಿ, ಬಿಸಿ‌ಎಂ ವಿಭಾಗ ಮಂಗಳೂರು ಇಲ್ಲಿಂದ ಪಡೆದುಕೊಂಡು ೨೦-೫-೧೦ರೊಳಗೆ ಭರ್ತಿ ಮಾಡಿ ವಿದ್ಯಾರ್ಥಿ ನಿಲಯಕ್ಕೆ ಸಲ್ಲಿಸಬಹುದು. ಅಥವಾ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪುತ್ತೂರು ಇವರಿಗೆ ಸಲ್ಲಿಸಬಹುದು.


Share: